HMV FARM FIRM

ಹೊಲದ ಸುತ್ತಲೂ ಬಯಲು ಪ್ರದೇಶ , ಕೆಂಪು ಭೂಮಿಯಾದುದರಿಂದ ತುಂಬಾ ಫಲವತ್ತತೆಇಂದ ಕೂಡಿದೆ .ಈ ನೆಲವು ಎಲ್ಲ ಬೆಳೆಗೂ ಸೂಕ್ತವಾಗಿದೆ. ಇಂತಹ 6 ಎಕರೆ ಭೂಮಿ ನಮ್ಮದಾಗಿದೆ ಇದರಲ್ಲಿ ನಾವು ಕಾಲಕ್ಕೆ ಅನುಸಾರವಾಗಿ ಬೆಳೆಗಳನ್ನು ಬೆಳೀತಾ ಇದೀವಿ. ಮುಂಗಾರಿನಲ್ಲಿ ಈರುಳ್ಳಿ, ಹತ್ತಿ, ಮೆಕ್ಕೆಜೋಳ,ಮೆಣಸಿನಕಾಯಿನಾ ಹಾಕ್ತೀವಿ . ಹಿಂಗಾರು ಮಳೆಗೆ ಜೋಳನ ಹೆಚ್ಚಾಗಿ ಹಾಕ್ತೀವಿ. ಮತ್ತು ಬೇಸಿಗೆಯಲ್ಲಿ ಟೊಮಟೋನಾ ಹಾಕ್ತೀವಿ.

Click on the button to send this farmer a message.

 6 ಎಕರೆ ಭೂಮಿಯಲ್ಲಿ  ಕಾಲಕ್ಕೆ ಅನುಸಾರವಾಗಿ ಬೆಳೆಗಳನ್ನು ಬೆಳೀತಾ ಇದೀವಿ. ಮುಂಗಾರಿನಲ್ಲಿ ಈರುಳ್ಳಿ, ಹತ್ತಿ, ಮೆಕ್ಕೆಜೋಳ,ಮೆಣಸಿನಕಾಯಿನಾ ಹಾಕ್ತೀವಿ . ಹಿಂಗಾರು ಮಳೆಗೆ ಜೋಳನ ಹೆಚ್ಚಾಗಿ ಹಾಕ್ತೀವಿ. ಮತ್ತು ಬೇಸಿಗೆಯಲ್ಲಿ ಟೊಮಟೋನಾ ಹಾಕ್ತೀವಿ.ಇವಾಗ ಸಾದ್ಯಕ್ಕೆ 3 ಎಕರೆನಲ್ಲಿ ಹತ್ತಿ ಮತ್ತು ಮೆಕ್ಕೆಜೋಳನ ಹಾಕಿದೀವಿ.BT ಹತ್ತಿ ಆದುದರಿಂದ ಗಿಡ ಜಾಸ್ತಿ ಎತ್ತರ ಬೆಳೆಯೋದಿಲ್ಲ ಆದರೆ ಹತ್ತಿಯ ಗುಣಮಟ್ಟ ಮಾತ್ರ ತುಂಬಾ ಚೆನ್ನಾಗಿರುತ್ತೆ. 3 ಹತ್ತಿಕಾಯಿನ ಬಿಡಿಸಿದರೆ ಒಂದು ಹಿಡಿ ಬರುತ್ತೆ ಅಷ್ಟು ದಪ್ಪ ಹತ್ತಿ ಇರುತ್ತೆ.2 ಎಕರೆನಲ್ಲಿ ಇರೋದ್ರಿಂದ ಸುಮಾರು 10 ರಿಂದ 12 ಕುಂಟಲ್ ಆಗಬಹುದು. ಇನ್ನೂ ಮೆಕ್ಕೆಜೋಳ ಇದುನ್ನ corn ಆಗಿ ಮಾರೋದಿಲ್ಲ ಒಣಗಿದ ಮೇಲೆ ಬೀಜವನ್ನು ಮಾರಾಟ ಮಾಡ್ತೀವಿ. ಈರುಳ್ಳಿ ,ಮೆಣಸಿನಕಾಯಿನ ಮತ್ತು ಕೊಟ್ತಂಬರಿ ಈ ಮೂರನ್ನೂ  ಒಟ್ಟಿಗೆ ಮಿಶ್ರಬೆಳೆ ರೂಪದಲ್ಲಿ ಹಾಕ್ತೀವಿ. ಕೊತ್ತಂಬರಿ ಸೊಪ್ಪನ್ನು ಮಾರ್ತೀವಿ. ಮೆಣಸಿನಕಾಯಿಯನ್ನು, ಹಸಿ ಮತ್ತು ಒಣಗಿದ್ದು ಎರಡನ್ನೂ ಮಾರುತ್ತೀವಿ. ಇದು ಬ್ಯಾಡಗಿ ಮೆಣಸಿನಕಾಯಿ ಜಾಸ್ತಿ ಖಾರ ಇರೋದಿಲ್ಲ ತುಂಬಾ ಉದ್ದ ಇರುತ್ತೆ .ಇನ್ನೂ ಈರುಳ್ಳಿನಾ ಯಾವಾಗಲೂ ಬೆಂಗಳೂರಿಗೆ ತಗೊಂಡು ಹೋಗ್ತಾ ಇದ್ವಿ. 

Produce:

Currently open transactions