ಅಂದವಲ್ಲಿ ಆಗ್ರೋ ಫಾರ್ಮ್

ನಮ್ಮ ಹಳ್ಳಿ ಮಲೆನಾಡಿಗೆ ಸೇರುತ್ತದೆ , ಸೊರಬ ತಾಲ್ಲೂಕಿನ ಅಂದವಲ್ಲಿ ಹಳ್ಳಿಯಲ್ಲಿ 50 ಎಕೆರೆ ಹೊಲ ಇದೆ ಎಲ್ಲ ನೀರಾವರಿ ಮತ್ತು ಗದ್ದೆ. ಪೈನ್ಯಾಪಲ್ , ಅಡಿಕೆ, ಬಾಳೆ ಭತ್ತ ನಮ್ಮ ತೋಟದ ವಿಶೇಷ ಬೆಳೆಗಳು.

Click on the button to send this farmer a message.

ಪೈನ್ಯಾಪಲ್ 55 ಸಾವಿರ ಸಸಿಗಳಿದವೆ ಒಂದು ತಿಂಗಳ ಹಿಂದೆ ಹಾಕಿದ್ದು ಇದು ಕಟಾವಿಗೆ ಬರೋದು ಮುಂದಿನ ವರ್ಷ . ಬಾಳೆ ಹಣ್ಣು (ಪಚ್ಚ ಬಾಳೆ) ಇವಾಗ ರೆಡೀ ಇದೆ ವಾರಕ್ಕೆ 2 ಕುಂಟಲ್ ಸಿಗುತ್ತದೆ ಒಟ್ಟೂ 1000 ಬಾಳೆ ಗಿಡಗಳಿದವೆ 3 ಎಕರೆನಲ್ಲಿದೆ. 5 ಎಕೆರೆನಲ್ಲಿ 5000 ಅಡಿಕೆ ಮರಗಳು 20 ವರ್ಷದಿಂದ ಇದಾವೆ, ಇದನ್ನ ನಾವು ಹಸಿ ಅಡಿಕೆ ಸಿಪ್ಪೆ ಸಮೇತ ಮಾರಾಟ ಮಾಡುತ್ತೇವೆ, ಇದು ವರ್ಷಕ್ಕೆ 600 ರಿಂದ 700 ಕುಂಟಲ್ ಆಗುತ್ತೆ. ಇವುಗಳನ್ನು ಬಿಟ್ಟರೆ ಭತ್ತನಾ ಬೆಳೀತಿವಿ .ಬಾಳೆ ಹಣ್ಣನ್ನು ವಾರಕ್ಕೆ ಒಂದು ಸಲ ಪೂರೈಕೆ ಮಾಡ್ತೀವಿ ಆದರೆ ಸಾಗಾಣಿಕೆ ವೆಚ್ಚನೆಲ್ಲ ಕೊಂಡುಕೊಳ್ಳುವವರೇ ನೋಡಿಕೊಳ್ಳಬೇಕು.ಅದರಲ್ಲೂ ಶಿವಮೊಗ್ಗ ಸುತ್ತ ಮುತ್ತ ಇರುವಂತಹರಾದರೆ ಇನ್ನೂ ಉತ್ತಮ

Produce:

Currently open transactions


Neighbors: