Praveen Molekar

ಚಾನಲ್ ನೀರನ್ನ ಬಳಸಿಕೊಂಡು ಮಳೆಯಾಶ್ರಯದಲ್ಲಿ ಬೆಳೆಯ ಬಹುದಾದಂತಹ ಕಬ್ಬು ಮತ್ತು ಮೆಕ್ಕೆ ಜೋಳವನ್ನ ಉತ್ತಮ ರೀತಿಯಲ್ಲಿ ಬೆಳೆದಿದ್ದೇವೆ.

Click on the button to send this farmer a message.

ಬೆಳಗಾವಿಯಲ್ಲಿ ಸುಮಾರು ಐದು ಎಕರೆ ಸ್ವಂತ ಜಮೀನಿದೆ. ಇದರಲ್ಲಿ ಮೂರು ಎಕರೆ ನೀರಾವರಿ, ಇನ್ನುಳಿದ ಎರೆಡು ಎಕರೆ ಮಳೆಯಾಶ್ರಿತ. ನೀರಾವರಿಯಲ್ಲಿ ನಾವು ಸಾಮಾನ್ಯವಾಗಿ ತರಕಾರಿಗಳನ್ನ  ಬೆಳೆಯುವುದು. ತಕ್ಷಣದಲ್ಲಿ ಹಸಿರುಮೆಣಸಿನ ಕಾಯಿ, ಗೋರಿ ಕಾಯಿ, ಹಾಗೂ ಕಬ್ಬನ್ನ ನೀರಾವರಿಯಲ್ಲಿ ಬೆಳೆದಿದ್ದೇವೆ. ಇನ್ನುಳಿದ ಬೆಳೆಗಳನ್ನ ಚಾನಲ್ ನೀರು ಬಿಡುವ ಸಮಯದಲ್ಲಿ ಬೆಳೆಯುತ್ತೇವೆ.ನಾವು ತರಕಾರಿಗಳನ್ನ ಇಲ್ಲೆ ಲೋಕಲ್ ಮಾರುಕಟ್ಟೆಯಲ್ಲಿ ಮಾರುತಿದ್ದೆವು, ಅದರಿಂದ ಯಾವುದೇ ಪ್ಯಾಕಿಂಗ್ ಮಾಡುತ್ತಿರಲಿಲ್ಲ. ಮೆಣಸಿನ ಕಾಯಿ ಸ್ವಲ್ಪ ಗಾತ್ರದಲ್ಲಿ ಚಿಕ್ಕದು ಆದರೆ ಸಾಮಾನ್ಯ ಕಾಯಿಗಿಂತ ಸ್ವಲ್ಪ ಜಾಸ್ತಿ ಖಾರವಿರುತ್ತದೆ.ಇನ್ನೂ ಕಬ್ಬು ಲೋಕಲ್ ತಳಿಯಾದರೂ ಕಾಂಡ ಮೃದುವಾಗಿರುತ್ತದೆ ಹಾಗೂ ಸಕ್ಕರೆ ಅಂಶ ಜಾಸ್ತಿ ಇದ್ದು ಇಳುವರಿ ಚನ್ನಾಗಿ ಬರುತ್ತದೆ.ಮುಂದಿನ ಬೆಳೆಗೆ ಗೋರಿ ಕಾಯಿ ಹಾಕುತಿದ್ದೇವೆ

Produce:

Currently open transactions


Neighbors: