ಹೂವಿನ ತೋಟ

ಹೂವುಗಳೇ ನಮ್ಮ ಮುಖ್ಯ ಬೆಳೆಗಳು ಸುಗಂಧರಾಜ , ಚೆಂಡು ಹೂವು , ಮಲ್ಲಿಗೆ ಹೂವು ಮತ್ತು ಗುಲಾಬಿ ಹೂವು. ಪ್ರತಿ ವರ್ಷ ಬೆಳೀತನೆ ಇರ್ತೀನಿ, ಹಾಗೆ ಇವುಗಳನ್ನು ಗುಲ್ಬರ್ಗ ಮಾರ್ಕೆಟ್ಗೆ ತಗೊಂಡು ಹೋಗಿ ಮಾರಾಟ ಮಾಡ್ತೀವಿ. ನಾವು ಬೇರೆ ಬೇರೆ ಹೂವುಗಳನ್ನು ಬೆಳೀತೀನಿ. ಮತ್ತು ಯಾರಾದರೂ ನನ್ನ ಹತ್ತಿರಾನೇ ಯಾವಾಗ್ಲೂ ತಗೋತೀನಿ ಅಂತ ಇದ್ದರೆ ನಾನು ಅವರು ಹೇಳಿದ ಹೂವನ್ನು ಬೇಳಿಯೋದಿಕ್ಕೆ ರೆಡೀ ಇದೀನಿ.

Click on the button to send this farmer a message.

ಚೆಂಡು ಹೂವು ಅರ್ಧ ಎಕರೆಯಲ್ಲಿದೆ ,ಗಿಡಗಳ ಮಧ್ಯ ಅಂತರ ಜಾಸ್ತಿ ಇದೆ ಅದರಿಂದಾಗಿ ಒಂದು ಗಿಡಕ್ಕೇನೆ ತುಂಬಾ ಹೂವುಗಳು ಸಿಗುತ್ತವೆ, ಇದು ಎರಡು ದಿನಕ್ಕೆ 30 ಕೆ ಜಿ ಸಿಗುತ್ತೆ. ಸುಗಂಧ ರಾಜ ಇದು ಕೂಡ ಚೆಂಡು ಹೂವಿನ ತರನೇ. ಗುಲಾಬಿ ಆ ಎರಡಕ್ಕಿಂತ ಸ್ವಲ್ಪ ಬದಲಾವಣೆ ಇದೆ .ಇದು ದಿನಕ್ಕೆ 20 ರಿಂದ 30 ಕೆಜಿ ಹೂವು ಸಿಗುತ್ತದೆ. ಮಲ್ಲಿಗೆ ಹೂವಲ್ಲಿ ನಾವು ದುಂಡು ಮಲ್ಲಿಗೆ ಹೂವನ್ನು ಹಾಕಿರೋದು ಇದು ವಾರಕ್ಕೆ ಒಟ್ಟೂ 25 ಕೆ ಜಿ ಸಿಗುತ್ತೆ.ಎಲ್ಲ ನೀರಾವರಿ ಮೂಕಂತರನೆ ಬೆಳೆತ ಇರೋದು . ಹೂವುಗಳನ್ನು ಬೇಳಿಯುವುದಕ್ಕೆ ಬೇಕಾದ ಎಲ್ಲ ತರಹದ ಸೌಕರ್ಯಗಳು ನಮ್ಮ ಬಳಿ ಇದಾವೆ ಅದರಿಂದಾನೆ ನಾನು ಹೇಳಿದ್ದು ನಾನು ಬೇಕಾದರೆ ಕೊಂಡುಕೊಳ್ಳುವವರಿಗೆ ಬೇಕಾದ ಆಧಾರದ ಮೇಲೆ ಹೂವುಗಳನ್ನು ಬೆಳೀತೀನಿ ಅಂತ.

Produce:

Currently open transactions


Neighbors: