ಸೀನಿ ಆಗ್ರೋ ಫಾರ್ಮ್

ಟೊಮ್ಯಾಟೋನಾ 1 ಎಕರೆನಲ್ಲಿ ಹಾಕಿದೀನಿ, ಎರಡು ದಿನಕ್ಕೆ ಒಂದು ಸಲ 5 ಬಾಕ್ಸ್ ಕೀಳ್ತಾ ಇದೀವಿ, ಒಂದು ಬಾಕ್ಸ್ಗೆ 20 ಇರುತ್ತದೆ.ಟೊಮ್ಯಾಟೋ ಬೆಳೆಯನ್ನು ಮುಖ್ಯ ಬೆಳೆಯಾಗಿ ಹರಿಸಿಕೊಂಡಿದ್ದೇನೆ. ಅದರಿಂದಾಗಿ ಇದರ ಬಗ್ಗೆ ಜಾಸ್ತಿ ಗಮನ ವಹಿಸಿ ಬೆಳೀತಾ ಇದೀವಿ.

Click on the button to send this farmer a message.

ಇದನ್ನು ಬಿಟ್ಟು ಬೇರೆ ಬೆಳೆಯಾಗಿ ರಾಗಿ , ತೊಗರಿ ಕಾಳು ಮತ್ತು ಹುರುಳಿಯನ್ನು ಹಾಕಿದ್ದೇನೆ. ರಾಗಿ-ತೊಗರಿಯನ್ನು ಅಂತರ ಬೆಳೆಯಾಗಿ ಬೆಳೀತಾ ಇದೀನಿ ಇದರಿಂದಾಗಿ ಮಣ್ಣಿನ ಫಲವತ್ತತೆ ಕೂಡ ಹೆಚ್ಚಾಗುತ್ತದೆ ಮತ್ತು ಇಳುವರಿ ಕೂಡ ಹೆಚ್ಚುತ್ತದೆ.3 ಎಕರೆಯಲ್ಲಿ ರಾಗಿ-ತೊಗರಿಯನ್ನು ಹಾಕಿದ್ದೇನೆ.6 ಸಾಲು ರಾಗಿ ಮತ್ತು 2 ಸಾಲು ತೊಗರೆ , ಇದೆ ತರಹ 3 ಎಕರೆ ಪೂರ್ತಿ ಮುಗಿಸಿದ್ದೇವೆ. ತೊಗರಿ ಕಾಳು 5 ಚೀಲ ಆಗಬಹುದು, ರಾಗಿ 35 ಚೀಲ ಆಗಬಹುದು.

Produce:

Currently open transactions


Neighbors: